TV9 News: Mongoose Vs. Cobra Fight on Road Caught On Udupi-Kundapur Highway....,
ಹಾವು ಮುಂಗುಸಿ ಬದ್ಧ ವೈರಿಗಳು ಅನ್ನೋದನ್ನು ನಾವು ನೀವು ಕೇಳಿದ್ದೇವೆ. ಅದು ವಾಸ್ತವವೇ ಅನ್ನೋದಕ್ಕೆ ಇದೊಂದು ನಿದರ್ಶನ. ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಒಂದುವಾರದ ಹಿಂದೆ ಹಾವು ಮತ್ತು ಒಂದು ಮುಂಗುಸಿ ಕಾದಾಡುತ್ತಿದ್ದವು. ಹಾವು ಹೆಡೆೆಎತ್ತಿ ಹೊಡೆಯಲು ಯತ್ನಿಸುತ್ತಿತ್ತು. ಮುಂಗುಸಿ ಆ ಕಡೆ, ಈ ಕಡೆ ಸರಿದು, ಬಾಲದ ಮೇಲೆ ನಿಂತಂತೆ ಎದೆದ್ದು ಹಾವನ್ನು ಮಣಿಸಲು ಯತ್ನಿಸುತ್ತಿತ್ತು. ಸುಮಾರು ಒಂದೆರಡು ನಿಮಿಷಗಳ ಕಾಲ ಹೀಗೆ ನಡೆಯಿತು. ಬಳಿಕ ಮುಂಗುಸಿ ನಾನು ಗೆದ್ದೆ ಅನ್ನೋ ರೀತಿ ಹಾವಿನ ತಲೆ ಹಿಡಿದು ರಸ್ತೆಯ ಪಕ್ಕಕ್ಕೆ ಎಳೆದೊಯ್ತು. ಇನ್ನು ಹಾವು ಮುಂಗುಸಿಯ ಕಾದಾಟವನ್ನು ಪ್ರತ್ಯಕ್ಷವಾಗಿ ಕಂಡ ಅಸ್ಲಾಂ ಎಂಬುವವರ ಸ್ನೇಹಿತರು ಈ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ. ಇದರ ಒಂದು ಝಲಕ್ ಇಲ್ಲಿದೆ.