Random Video

ಯಶ್ ಅವರ ಕೆ.ಜಿ.ಎಫ್ ಟೀಸರ್ ಬಗ್ಗೆ ತಮಿಳುನಾಡು ಪ್ರೇಕ್ಷಕರು ಏನು ಹೇಳಿದ್ದಾರೆ ಗೊತ್ತಾ ? | FIlmibeat Kannada

2018-01-11 2,795 Dailymotion

ರಾಕಿಂಗ್ ಸ್ಟಾರ್ ಯಶ್ ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ಕೆ.ಜಿ.ಎಫ್' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಈಗಾಗಲೇ ಯೂಟ್ಯೂಬ್ ನಲ್ಲಿ 'ಕೆ.ಜಿ.ಎಫ್' ಸಿನಿಮಾ ಟೀಸರ್ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಈ ಸಿನಿಮಾಗೆ ಫಿದಾ ಆಗಿದ್ದಾರೆ. 'ಕೆ.ಜಿ.ಎಫ್' ಕನ್ನಡದಲ್ಲಿ ಬರುತ್ತಿರುವ ದೊಡ್ಡ ಬಜೆಟ್ ಸಿನಿಮಾ. ಪಕ್ಕದ ಇಂಡಸ್ಟ್ರಿಯ ಸಿನಿಮಾಗಳಿಗೆ ಸೆಡ್ಡು ಹೊಡೆಯುವುದಕ್ಕೆ ಈ ಸಿನಿಮಾ ಸಜ್ಜಾಗಿದೆ. ಪ್ರತಿ ಹಂತದಲ್ಲಿಯೂ ದೊಡ್ಡ ಸುದ್ದಿ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ಕನ್ನಡ ಸಿನಿಮಾಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಸಿನಿಮಾ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ. ಇದೆಲ್ಲದರ ನಡುವೆ ತಮಿಳುನಾಡು ಪ್ರೇಕ್ಷಕರನ್ನು ಸಹ 'ಕೆ.ಜಿ.ಎಫ್' ಸಿನಿಮಾ ಗಮನ ಸೆಳೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ನೋಡಲಾದ ಟೀಸರ್ ಗಳಲ್ಲಿ ಇದು ಕೂಡ ಒಂದಾಗಿದೆ.

Rocking star Yash's KGF teaser is catching all eyes . Yash's fans from Tamilnadu have made a about KGF teaser and have praised it a lot .